'ಕಾಲ್ಪಿ- ಸಕ್ರಿ'
ಆ ವ್ಯಕ್ತಿ ತನ್ನ ಮಣ್ಣಿನ ಮಡಿಕೆಯನ್ನಿಡಿದು ಪ್ರತಿ ಮನೆ ಮನೆಯ ಅಂಗಳವನ್ನೂ ತುಳಿದ. ತನ್ನ ಮಡಿಕೆ ಹಿಡಿದ ಕೈಯನ್ನು ಚಾಚುತ್ತಾ ಕೇಳಿದ ಭಿಕ್ಷೆಯೊಂದೇ ‘ನಂಗೆ ನಿಮ್ಮ ಹಮ್ಮು, ಮುಖವಾಡ, ಮಂಕು ಹಿಡಿದ ದುರ್ಮನಸ್ಸು, ಸಾಧ್ಯವಾದರೆ ‘ನಾನು’ವನ್ನು ದಾನಮಾಡಿ’... ಹಳ್ಳಿಯ ಬಹುತೇಕ ತೆರೆದ ಬಾಗಿಲಿನ ಮನೆಗಳು ಬಾಗಿಲು ಹಾಕಿಕೊಂಡವು. ಇಡೀ ಹಳ್ಳಿಗೆ ಹಳ್ಳಿಯೇ ಬಿಕೋ ಎನ್ನತೊಡಗಿತು. ಬೀದಿಯಲ್ಲಿ ತಮ್ಮ ನಾಯಿಯನ್ನೂ ಬಿಡದೆ ಮನೆಯೊಳಗೆ ಕರೆದು ಬಾಗಿಲು ಜಡಿದುಕೊಂಡಿದ್ದರು. ಈ ಬೆಳವಣಿಗೆಯಿಂದ , ಮನುಕುಲದೊಳಗೆ ಮಾನವೀಯತೆ ಬಿತ್ತಲು ಮಳೆಯಾಗಿಲ್ಲವಿನ್ನೂ ಎಂದುಕೊಳ್ಳುತ್ತಾ, ಆ ವ್ಯಕ್ತಿ ಮರುಗಿದ. ತಾನು ಕೇಳಿದ ಭಿಕ್ಷೆಯ ಅಂಶಗಳಿಗಾಗಿ ಹಸಿದಿದ್ದ ವ್ಯಕ್ತಿಯ ಮನಸ್ಸೊಂದೇ ಅಲ್ಲ, ಅವನ ದೇಹವೂ ಊರಾಚೆ ಕಲ್ಲಾಯಿತು. ಆ ಮಿಡಿವ ಹೃದಯ ಕಲ್ಲಾದದ್ದ ಕಂಡು ಮತ್ತೆ ಹಳ್ಳಿಯ ಎಲ್ಲ ಮುಚ್ಚಿದ ಬಾಗಿಲುಗಳು ತೆರೆದು, ಆ ಕಲ್ಲಿಗೆ ಹಾಲು ತುಪ್ಪದ ನೈವೇದ್ಯ ಮಾಡಿದರು. ಮುತೈದೆಯರು ನೂರೊಂದು ಕಳಶಗಳ ಮೆರವಣಿಗೆ ನಡೆಸಿದರು. ಉಳ್ಳವರು ಅಭಿಷೇಕ ಮಾಡಿದರು. ಇದನ್ನೆಲ್ಲ ಕಂಡ ಕಲ್ಲುಮನಸ್ಸು ಒಳಗೊಳಗೇ ನಡುಗುತ್ತಿತ್ತು. ನಲುಗುತ್ತಿತ್ತು.

No comments:
Post a Comment