Shivu Morigeri

Sunday, 21 July 2013

'ಅವಧಿ'ಯೊಂದು ನಂಗೆ ಆಗ ಅನ್ನವಿಕ್ಕದಿದ್ದೊಡೆ...

ಅಲ್ಲಿಯವರೆಗೂ ನಾನು ಕಲಿತದ್ದು ಅದಿನ್ನೆಂಥಾ ಶಿಕ್ಷಣವೋ ? ಎಂಬ ಅನುಮಾನ ಬರುವಂಥಾ ವೈರುಧ್ಯದ, ಸಂಪೂರ್ಣ ತಿಳುವಳಿಕೆಯ ಇನ್ನೊಂದು ಮಗ್ಗುಲನ್ನು ನಾನು ಕಂಡುಕೊಂಡದ್ದು  'ಸಂವಾದ' ಸಂಸ್ಥೆಯ ಬದುಕು ಕಮ್ಯುನಿಟಿ ಕಾಲೇಜಿನ ಆರು ತಿಂಗಳ ಪತ್ರಿಕೋಧ್ಯಮ ಅಧ್ಯಯನದಲ್ಲಿ ಕಂಡುಕೊಳ್ಳುತ್ತಲೇ ನನಗೆ ಕೊಂಚ ಗೊಂದಲ ಕಾಡಲು ಶುರುವಿಟ್ಟು ಕೋರ್ಸು ಇನ್ನೇನು ಎರೆಡು ತಿಂಗಳು ಬಾಕಿ ಇದೆ ಎನ್ನುವಾಗಲೇ ನಾನು ನಮ್ಮ ಊರಿಗೆ ಮರಳಿ ಹೋಗಲು ನಿರ್ದರಿಸುತ್ತಿದ್ದೆ. ಹಾಗೊಂದು ವೇಳೆ ನಾನು ವಾಪಾಸ್ಸು ನನ್ನ ಹಳ್ಳಿಗೆ ಹೋಗಿಬಿಟ್ಟಿದ್ದರೆ ದೇವರಾಣೆಗೂ ಇನ್ನೊಮ್ಮೆ ಬೆಂಗಳೂರಿಗೆ ನನ್ನ್ನನು ಕಳಿಸಿಕೊಡಲು ನನ್ನ ಮನೆಯವರು ತಯಾರಿರಲಿಲ್ಲ ಎಂಬುದೂ ನಂಗೆ ಮನವರಿಕೆಯಾಗಿತ್ತು. ಅವಶ್ಯವಾಗಿ ಅಂಥಹ ಸಂದರ್ಭದಲ್ಲಿ ನಂಗೆ ಗಾಡ್ ಫಾದರ್ ಒಬ್ಬರ ಅಗತ್ಯ ಬೇಕೇ ಬೇಕಿತ್ತು.  ಹಾಗೆ ನಾನು ಗೊಂದಲದಲ್ಲಿ ಮುಳುಗಿ, ಒಂದು ಅನಿವಾರ್ಯತೆಯಲ್ಲಿ ಮುಳುಗಿದ್ದಾಗಲೇ ಪ್ರೀತಿಯಿಂದ ನನ್ನ ಕೈಹಿಡಿದದ್ದು ನನ್ನ
'ಅವಧಿ'
ನಿಜಕ್ಕೂ ಕೋಸರ್ಿನ ಎಲ್ಲಾ ವಿಧ್ಯಾಥರ್ಿಗಳು ತಮ್ಮ ಭವಿಷ್ಯಕ್ಕಾಗಿ ಉದ್ಯೋಗ ಕಂಡುಕೊಳ್ಳಲು ಆಕರ್ಷಕ ರೆಸ್ಯೂಮ್ ಗಳನ್ನು ತಯಾರಿಸಲು ಒಂದು ಕ್ಲಾಸ್ ಬೇಕು ಎಂದು ಮುರುಳಿ ಸಾರ್ ಹತ್ತಿರ ಕೇಳುವ ಹೊತ್ತಿಗೆಲ್ಲಾ ನಂಗೆ 'ಅವಧಿ' ಆಶ್ರಯ ನೀಡಿಯಾಗಿತ್ತು. ನನ್ನ ಸ್ನೇಹಿತರೆಲ್ಲರೂ ಲ್ಯಾಬ್ ನಲ್ಲಿ ರೆಸ್ಯೂಮ್ ರೆಡಿ ಮಾಡುವಾಗ ನಾನು ಅವರ ಮಗ್ಗುಲೇ ಕುಳಿತು 'ಲೇ ತಮಾ, ನಂದೂ ಒಂದು ರೆಸ್ಯೂಮ್ ರೆಡಿ ಮಾಡ್ರೋ' ಅಂತ ಕೇಳಿದ್ರೆ, 'ನಿಮಗ್ಯಾಕ್ರೀ ರೆಸ್ಯೂಮ್?' ನಿಮ್ಮ ಗರುರುಗಳು ನಿಮಗಿದ್ದಾರೆ. ಚಿಂತೇನೇ ಇಲ್ಲ ನಿಮಗೆ ಅಂತ ರಮಿಸಿದ್ದರು. ಸರಿ ಆ ಎರೆಡು ತಿಂಗಳು ಕಳೆದದ್ದೂ ಆಯಿತು. ಕೋಸರ್ು ಮುಗಿದದ್ದೂ ಆಯಿತು. ನನ್ನ ಸಹಪಾಠಿಗಳೆಲ್ಲಾ ಮಾಧ್ಯಮದಲ್ಲಿ ಹೊಸ ಚಿಗುರುಗಳಾಗಿ ಮೊಳೆಯತೊಡಗಿದ್ದೂ ಆಯಿತು. ಆದ್ರೆ ಹೊಸದಾಗಿ ಒಂದು ಸೂರಿನಿಂದ ಬೇರ್ಪಟ್ಟ ನಮಗೆಲ್ಲಾ ಬೇರೆ ಬೇರೆ ಸೂರುಗಳ ಅನಿವಾರ್ಯತೆ ತಲೆದೋರಿತು. ಅದಕ್ಕೆ ಎಲ್ಲರೂ ತುಂಬಾ ಕಷ್ಟಪಟ್ಟು ಹಸಿವನ್ನು ಕಟ್ಟಿ ಕನಸುಗಳು ಕಮರದಂತೆ ಹೆಣಗುತ್ತಿದ್ದರೆ ನಾನು 'ಅವಧಿ' ಮನೆಯಲ್ಲಿ ಹೊತ್ತಿಗೆ ಸರಿಯಾಗಿ ತಿಂದುಂಡು ಬೆಚ್ಚಗೆ ದಿಂಬಿಗೆ ತಲೆಕೊಡುತ್ತಿದ್ದೆ.
ಕಾಲ ಸರಿಯುತ್ತಲೇ ನನ್ನೆಲ್ಲಾ ಸ್ನೇಹಿತರ ಉದ್ಯೋಗ ಲೋಕದಲ್ಲಿ ಬೆಳ್ಳ ನಗು ಮಿಂಚತೊಡಗಿತು. ಇನ್ನೇನು ಎಲ್ಲರೂ ನೆಲೆನಿಲ್ಲುತ್ತಿರುವ ಹೊತ್ತಿಗೆ ಸರಿಯಾಗಿ ನಾನು 'ಅವಧಿ' ಯ ಕೆಲಸದಿಂದ ಮಾತ್ರ ದೂರಾದೆ. ಹಾಗೆ ಹೆಮ್ಮೆಯಿಂದ ನಾನು 'ಅವಧಿ'ಯಿಂದ ಬೀಳ್ಗೊಂಡ ತಕ್ಷಣ ನಾನು ಸುದ್ದಿಯನ್ನು ನನ್ನವರೆನ್ನಿಸಿದ ಯಾರೊಬ್ಬರೆದಿರೂ ಉಸುರಲಿಲ್ಲ. ಆದರೆ ಒಂದೇ ಒಂದು ವಾರಕ್ಕೆ ವಿಷಯ ಎಲ್ಲರಿಗೂ ತಿಳಿಯುತ್ತಿದ್ದಂತೆ ಎಲ್ಲರೂ ನನ್ನನ್ನು ಮೊದಲು ಕೇಳಿದ ಪ್ರಶ್ನೆ 'ನಿಜ ಹೇಳ್ತಿದಿರಾ ಶಿವಣ್ಣಾ ? ರೀ ನಿಮ್ಮನ್ಯಾಕ್ರೀ ತೆಗೀತಾರ.ೆ ನಾಟಕ ಮಾಡಬೇಡಿ ನಿಜ ಹೇಳಿ. ಬರೀ ಇಂಥವೇ ಡೈಲಾಗುಗಳು. ಆದರೆ ವಾಸ್ತವ ಗೊತ್ತಾಗುತ್ತಿದ್ದಂತೆಯೇ ನಾನೇನೋ ಅನಾಥನಾದೆನೆಂಬಂತೆ ಕರುಣೆ ತೋರಲು ಬಂದವರೂ ಉಂಟು. ಆದರೆ ಅಸಲಿಯತ್ತು ಏನೆಂಬುದು ನನಗೆ ಗೊತ್ತಿತ್ತು. ನಾನು 'ಅವಧಿ'ಯ ಕೆಲಸಗಳಿಂದ ಮಾತ್ರ ದೂರಾದದ್ದು. ಅದರ ಮಮತೆ, ಹಾರೈಕೆ, ಕಲಿಕೆ, ಮತ್ತಾವುದರಿಂದಲೂ ನಾನು ದೂರಾಗಿಲ್ಲ. ಆಗೋದೂ ಇಲ್ಲ.
ಹಾಗೊಂದು ವೇಳೆ 'ಅವಧಿ'ಯೊಂದು ನಂಗೆ ಆಗ ಅನ್ನವಿಕ್ಕದಿದ್ದೊಡೆ ಬೆಂಗಳೂರಿಗೆ ಬೆನ್ನುಮಾಡಿ ಶಿವು ಮೋರಿಗೇರಿ ಅನೋ ಹುಡುಗ, ಪಕ್ಕಾ ಹಳ್ಳಿ ಪೋಲಿಯಾಗಿ ಎಲ್ಲೋ ಕಳೆದು ಹೋಗುತ್ತಿದ್ದ. ರೆಕ್ಕೆ ಬಲಿತ ಹಕ್ಕಿ ಬಚ್ಚಿನಲ್ಲಿ ಕುಳಿತು ಬಾಯಿ ತೆರೆದರೆ ಯಾವ ತಾಯಿ ಹಕ್ಕಿಯೂ ಬಂದು ಗುಟುಕು ನೀಡೊಲ್ಲ. ಕೊಕ್ಕಿನಿಂದ ಕುಕ್ಕಿ ಬಚ್ಚಿನಿಂದ ಕೆಳಗೆ ಕೆಡವೋದು ತನ್ನ ಸಾಮಥ್ರ್ಯ ತನಗೆ ತಿಳಿಯಲಿ ಎಂಬ ತಾಯಿ ಮಿಡಿತ ಆ ಮರಿ ಹಕ್ಕಿಗೆ ತಿಳಿಯೋಕ್ಕೆ ಮಾತ್ರ ಸಾಧ್ಯ ಅಲ್ವಾ ? ಮುಂದೆ, ಕೆಳಗೆ ಬಿದ್ದ ಮರಿ ಹಕ್ಕಿ ಹಾರಲು ಪ್ರಯತ್ನಿಸಿ ಮಣ್ಣಲ್ಲಿ ಹೊರಳಾಡಿ, ಪೇಚಾಡಿ ಅಂತೂ ಬಾನಿಗೆ ನೆಗೆಯುತ್ತೆ ಒಂದಲ್ಲಾ ಒಂದು ಕ್ಷಣ. ನಂಗೆ ಈ ಸತ್ಯ ಗೊತ್ತಿತ್ತು. ಹಾಗಾಗಿ ದಾರಿ ಹುಡುಕಲು ಬುತ್ತಿ ಕಟ್ಟುವ ಮೊದಲು ಕೊಂಚ ಸ್ಮೃತಿ ಸ್ಥಿತಿಯನ್ನು ಸಹಜಕ್ಕೆ ತಂದುಕೊಳ್ಳೋಕ್ಕೆ ಕೆಲವು ದಿನಗಳನ್ನು ನಾನು ಅಜ್ಞಾತವಾಗಿಯೇ ಕಳೆದು, ಮತ್ತೆ ಮುಖ್ಯ ವೀದಿಗೆ ನಿಲ್ಲಲು ಯೋಚಿಸಿ ಮತ್ತೊಂದು ನಿಲುವು ತಳೆದು ಇನ್ನೆಲ್ಲೊ ಕೂರಬೇಕಾದದ್ದೂ ಆಯಿತು. ಇನ್ನು ಮುಂದೆ ? ಗೊತ್ತಿಲ್ಲ.  
 

No comments:

Post a Comment