ಹಾವ ಹೊಳೆ ಚೇಳ ಮಳೆ
ಆ ವೃದ್ಧ ಆಗಷ್ಟೇ ಊಟ ಮುಗಿಸಿ ವಿಶ್ರಾಂತಿಗೆಂದು ಕುಳಿತಿದ್ದ. ಆಗ ಎಲ್ಲಿದ್ದನೋ ಮೊಮ್ಮಗ ನಟರಾಜ. ಬಂದ ಬಂದವನೇ ತನ್ನ ತಾತನ ತೊಡೆಯ ಮೇಲೆ ಕುಳಿತು ನೇರ ಜೇಬಿಗೆ ಕೈ ಹಾಕಿದ. ನಸು ನಕ್ಕ ತಾತ 'ಏನೋ ಬೇಕು ನಿಂಗೆ ?' ಕೇಳಿದ 'ಅಜ್ಜೀನ ಹುಡುಕ್ತಾಯಿದಿನಿ' ತೊದಲುತ್ತಾ ನುಡಿದ ಮಗೂಗೆ ಆರು ವರ್ಷವಾ ? ಇನ್ನೂ ನಿಕ್ಕಿಯಾಗಿಲ್ಲ. ಆ ಮುಗ್ದ ಕೀಟಲೆಗೆ ಒಳಗೊಳಗೇ ಖುಷಿಯ ಶಿಖರವೇರಿದ ತಾತ, ಬೆಳ್ಳಿ ಮೇಸೆ ಆ ಹಾಲುಗೆನ್ನೆಗೆ ಚುಚ್ಚುವಂತೆ ಒಂದು ಮುತ್ತು ನೀಡಿ, 'ಲೇ ಕಳ್ಳಾ, ದೊಡ್ಡೋನಾಗಿಬಿಟ್ಟೆ ಕಣೋ ನೀನು' ಎಂದೇಳುತ್ತಾ 'ಮಹಡಿ ಮೇಲಿದಾಳೆ ನೋಡು. ಚಂದ್ರನ್ನ ನೋಡ್ತಾ ಅವಳೂ ಮಗುವಾಗ್ತಾಯಿದಾಳೆ' ಎನ್ನುತ್ತಲೇ ನಟರಾಜ ಮೆಟ್ಟಿಲುಗಳನ್ನು ದಡಬಡಾಯಿಸಿ ಏರತೊಡಗಿದ. ಅವನ ಅವಸರವನ್ನು ಕಂಡ ವೃದ್ಧ 'ಲೇ ಬಿದ್ದೀಯ ಕಣೋ, ಮೆಲ್ಲಗ್ಹೋಗು' ಎನ್ನುವ ಮಾತುಗಳನ್ನು ಕೇಳಿಸಿಕೊಂಡ ನಟರಾಜನ ತಾಯಿ ಟಿವಿ ನೋಡುವುದನ್ನು ಬಿಟ್ಟು ಹೊರ ಬಂದು, 'ಲೇಹ್, ಹೊತ್ತಾಯ್ತು ಮಲ್ಕೋ ಬಾರೋ' ಎಂದು ಕೂಗುತ್ತಲೇ ನಟರಾಜ ಬರಲ್ಲ ಎಂಬಂತೆ ಕೈಯಾಡಿಸುತ್ತಾ ಮೊಳಕಾಲಿನ ಮೇಲೆ ಕೈಗಳನ್ನು ಊರುತ್ತಾ ಮೆಟ್ಟಿಲುಗಳನ್ನೇರತೊಡಗಿದಾಗ, 'ಹಾಳಾದೋನು, ಪಾಪ ಈಗ ಅತ್ತೆ ಜೀವ ತಿಂತಾನೆ' ಎಂದುಕೊಳ್ಳುತ್ತಾ ಒಳಹೋಗಿ ಮತ್ತೆ ಟಿವಿ ನೋಡುವಲ್ಲಿ ತಲ್ಲೀನಳಾದಳು.
ಇತ್ತ ಮಾಳಿಗೆಯನ್ನೇರಿದ ನಟರಾಜ ಮುಗಿಲೆಡೆಗೆ ಮುಖಮಾಡಿ ಚಂದ್ರನ ಮುಖದಲ್ಲಿ ತನ್ನ ಕಂಗಳನ್ನದ್ದಿದ್ದ ಅಜ್ಜಿಯ ಕೈ ಬಳೆಗಳನ್ನು ತಟ್ಟಿ 'ಅಜ್ಜೀ' ಎನ್ನುತ್ತಲೇ ಮೊಮ್ಮಗುವನ್ನು ನೊಡಿದ ಅಜ್ಜಿ , ಒಂದೆಡೆ ಕುಳಿತಾಗ ಇವನೂ ಪಕ್ಕ ಕುಳಿತು ಮೆಲ್ಲಗೆ ತೊಡೆಗೆರಗಿದ. ಅಜ್ಜಿ ಮಗುವಿನ ತಲೆಯನ್ನು ನೇವರಿಸುತ್ತಿದ್ದಾಗ ' ಅಜ್ಜೀ ಒಂದು ಕಥೆ ಹೇಳು' ಮುಗ್ಧತೆಯಿಂದ ಕೇಳಿದ್ದ. ಅಜ್ಜಿಯ ಮನಸಲ್ಲಿ ಎಷ್ಟು ಕಥೆಗಳಿವೆಯೋ, ಒಂದೇ ಮಾತಿಗೆ ಕಥೆಯನ್ನು ಪ್ರಾರಂಭಿಸಿದಳು. 'ಸರಿ ಹೇಳ್ತೀನಿ ಕೇಳು' ಎನ್ನುತ್ತಲೇ ಎದ್ದು ಕುಳಿತ ನಟರಾಜ ಇಷ್ಟಗಲ ಕಂಗಳನ್ನಗಲಿಸಿ ಅಜ್ಜಿಯನ್ನೇ ನೋಡುತ್ತಾ ಕುಳಿತ. ಅಜ್ಜಿ ಕಥೆಯನ್ನು ಶುರುವಿಟ್ಟಳು.
ಇತ್ತ ಮಾಳಿಗೆಯನ್ನೇರಿದ ನಟರಾಜ ಮುಗಿಲೆಡೆಗೆ ಮುಖಮಾಡಿ ಚಂದ್ರನ ಮುಖದಲ್ಲಿ ತನ್ನ ಕಂಗಳನ್ನದ್ದಿದ್ದ ಅಜ್ಜಿಯ ಕೈ ಬಳೆಗಳನ್ನು ತಟ್ಟಿ 'ಅಜ್ಜೀ' ಎನ್ನುತ್ತಲೇ ಮೊಮ್ಮಗುವನ್ನು ನೊಡಿದ ಅಜ್ಜಿ , ಒಂದೆಡೆ ಕುಳಿತಾಗ ಇವನೂ ಪಕ್ಕ ಕುಳಿತು ಮೆಲ್ಲಗೆ ತೊಡೆಗೆರಗಿದ. ಅಜ್ಜಿ ಮಗುವಿನ ತಲೆಯನ್ನು ನೇವರಿಸುತ್ತಿದ್ದಾಗ ' ಅಜ್ಜೀ ಒಂದು ಕಥೆ ಹೇಳು' ಮುಗ್ಧತೆಯಿಂದ ಕೇಳಿದ್ದ. ಅಜ್ಜಿಯ ಮನಸಲ್ಲಿ ಎಷ್ಟು ಕಥೆಗಳಿವೆಯೋ, ಒಂದೇ ಮಾತಿಗೆ ಕಥೆಯನ್ನು ಪ್ರಾರಂಭಿಸಿದಳು. 'ಸರಿ ಹೇಳ್ತೀನಿ ಕೇಳು' ಎನ್ನುತ್ತಲೇ ಎದ್ದು ಕುಳಿತ ನಟರಾಜ ಇಷ್ಟಗಲ ಕಂಗಳನ್ನಗಲಿಸಿ ಅಜ್ಜಿಯನ್ನೇ ನೋಡುತ್ತಾ ಕುಳಿತ. ಅಜ್ಜಿ ಕಥೆಯನ್ನು ಶುರುವಿಟ್ಟಳು.
'ಅಲ್ಲಿಯವರೆಗೂ ಅಲ್ಲೊಬ್ಬ ರಾಜನಿದ್ದ. ಅವನು ಅನಾಗರಿಕ ರಾಜನಾಗಿದ್ದ. ಲಂಪಟನಾಗಿದ್ದ. ಸದಾ ರಾಣಿಯ ಸೆರಗನ್ನು ಹಿಡಿದು ಅಲೆವ ಸ್ತ್ರೀಲೋಲನಾಗಿದ್ದ. ತನ್ನ ರಾಜ್ಯದಲ್ಲಿ ಯಾವುದೇ ಕೆಲಸಕ್ಕೆ ಹೋದರೂ ರಾಣಿಯನ್ನು ಜೊತೆಯಲ್ಲಿ ಕರೆದುಕೊಂಡೇ ಹೋಗುತ್ತಿದ್ದ. ಸದಾ ಮೋಜು ಮಾಡುತ್ತಾ ನರ್ತಕಿಯರ ನಾಟ್ಯಗಳಲ್ಲಿ, ಸುಂದರಾತಿಸುಂದರಿಯರ ಮೇಲೆ ಒಂದು ನಿಗಾ ಇಟ್ಟಿರುತ್ತಿದ್ದ. ಅವನಿಗೆ ರಾಜ್ಯದ ಜನತೆ ಹೇಗೆ ಜೀವನ ಸಾಗಿಸುತ್ತಿದ್ದಾರೆ, ರಾಜ್ಯದ ಪರಿಸ್ಥಿತಿ ಹೇಗಿದೆ, ರಾಜ್ಯದ ಆಡಳಿತಕ್ಕೆ ತೆರಿಗೆ ಎಷ್ಟು ಬರುತ್ತೆ, ತೆರಿಗೆ ಕಟ್ಟೋದಕ್ಕೆ ಪ್ರಜೆಗಳು ಎಷ್ಟು ಹಿಂಸೆ ಅನುಭವಿಸ್ತಾಯಿದಾರೆ, ಜನತೆಗೆ ಕಷ್ಟಸುಖಗಳೇನು, ಅವರ ಬೇಕು ಬೇಡಗಳೇನು, ಯಾವುದರ ಬಗ್ಗೆಯೂ ಚಿಂತಿಸದೇ ಈ ಎಲ್ಲಾ ಜವಾಬ್ದಾರಿಯನ್ನು ತನ್ನ ಆಸ್ಥಾನದ ಮಂತ್ರಿ ಮಹೋದಯರುಗಳಿಗೆ, ಸೇನಾಧಿಪತಿಗಳಿಗೆ, ಖುಷಿಮುನಿಗಳಿಗೆ ವಹಿಸಿಕೊಟ್ಟು ತಾನು ಮಾತ್ರ ಸದಾ ಅಮಲಿನಲ್ಲಿ ತೇಲುತಿದ್ದ. ಅವನಿಗೆ ಹೇಳೋರು ಕೇಳೋರಾದ್ರೂ ಯಾರೂ ಇರಲಿಲ್ಲ. ಅಷ್ಟೊಂದು ಪ್ರೀತಿಗೆ ಪಾತ್ರವಾಗಿದ್ದ ರಾಣಿಯೂ ಆಡಳಿತದ ವಿಚಾರದಲ್ಲಿ ಕಿಮಕ್ ಅನ್ನಂಗಿರಲಿಲ್ಲ.
ಅವನ ರಾಜ್ಯಾಡಳಿತದಲ್ಲಿ ಒಮ್ಮೆ ಪಕ್ಕದ ರಾಜ ಆಕ್ರಮಣ ಮಾಡಿ ಯುದ್ಧಕ್ಕೆ ಆಹ್ವಾನವಿತ್ತಾಗ ರಾಜೀ ಸೂತ್ರದ ದಾರಿಯನ್ನು ಹುಡುಕಿ ಪ್ರಜೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ ಅದನ್ನು ಕಪ್ಪವೆಂದು ಒಪ್ಪಿಸಿದ ತಲೆಹಿಡುಕನಾಗಿದ್ದ. ಈ ಘಟನೆ ನಡೆದ ಮರುವರ್ಷ ಅಲ್ಲಿ ಭೀಕರ ಕ್ಷಾಮ ತಲೆದೋರಿತು. ಇಡೀ ಸಾಮ್ರಾಜ್ಯದ ಜನತೆ, ಪ್ರಾಣಿ, ಪಕ್ಷಿ, ಎಲ್ಲಾ ಜೀವ ಸಂಕುಲಗಳಿಗೂ ಕುಡಿಯಲು ಹನಿ ನೀರು ಸಿಗದೆ, ಹೊಟ್ಟೆಗೆ ತುತ್ತು ಅನ್ನವೂ ಇಲ್ಲದೆ ಕಂಗಾಲಾದಾಗ, ಪರಿಸ್ಥಿತಿ ಆಸ್ಥಾನದ ಆಡಳಿತಾಧಿಕಾರಿಗಳ ಶಕ್ತಿ ಮೀರಿ ರಾಜನ ಬಳಿ ಹೋಗುವಷ್ಟರಲ್ಲಿ ಅರಮನೆಯ ಮುಂದೆ ಪ್ರಜೆಗಳೆಲ್ಲಾ ರಾಜನ ಸಹಾಯವನ್ನು ಕೇಳಲು ಜಮಾಯಿಸಿದಾಗ ಆಸ್ಥಾನದ ಮಹಡಿಯ ಮೇಲೆ ಪ್ರಜೆಗಳಿಗೆ ರಾಣಿಯೊಂದಿಗೆ ದರ್ಶನ ನೀಡಿದ ರಾಜ, ಈ ಎಲ್ಲಾ ಅವಗಢಗಳಿಗೆ ನನ್ನ ಸಾಮ್ರಾಜ್ಯದಲ್ಲಿರುವ ಅನ್ಯ ಧರ್ಮಿಯರು ನನ್ನ ಆಡಳಿತವನ್ನು ನೋಡಿ ಹೊಟ್ಟಿಕಿಚ್ಚಿಗೆ ನಡೆಸುತ್ತಿರುವ ವಾಮಾಚಾರ ಮಾಡುತ್ತಿದ್ದಾರೆ, ಅವರು ಸೈತಾನ್ ಸಹವಾಸ ಮಾಡಿದ್ದಾರೆ, ಅದಕ್ಕೇ ನಿಮಗೆಲ್ಲಾ ಈ ಕಷ್ಟಗಳು ಬಂದಿವೆ. ಇದಕ್ಕೆ ರಾಜ ಪುರೋಹಿತರು, ಗುರು ಗಣ್ಯರನ್ನು ಕರೆದು ಅರಮನೆಯಲ್ಲಿ ಯಜ್ಞಯಾಗಾದಿಗಳನ್ನು ಮಾಡಿಸಿ ಆ ದುಷ್ಟ ಶಕ್ತಿಗಳನ್ನು ದಮನಮಾಡಿ ನಿಮ್ಮನ್ನು ಕಾಪಾಡುತ್ತೇನೆ' ಎಂದ.
ಇಷ್ಟೊತ್ತೂ ಅಜ್ಜಿಯ ಕಥೆಯನ್ನು ಕೇಳುತ್ತಿದ್ದ ನಟರಾಜ ಮೆಲ್ಲಗೆ ಅಜ್ಜಿಯ ಕೈಯನ್ನು ಮುಟ್ಟಿ 'ಅಜ್ಜೀ ಧರ್ಮ ಅಂದ್ರೆ ಯಾರು ? ಕೆಟ್ಟ ದೇವರು ಎಲ್ಲಿದಾವೆ ?' ಎಂದು ಪ್ರಶ್ನಿಸಿದ್ದಕ್ಕೆ 'ಅದೊಂದು ದೊಡ್ಡ ಕಥೆನಪ್ಪಾ ಅದನ್ನ ನಾಳೆ ಹೇಳ್ತೀನಿ. ಈ ಕಥೇಲಿ ಆಮೇಲೇನಾಯ್ತು ಅಂದ್ರೆ...' ಅಂತೇಳಿ ಮತ್ತೆ ಉಳಿದ ಕಥೆಯನ್ನು ಅಜ್ಜಿ ಮುಂದುವರೆಸಿದಳು. 'ಯಾವಾಗ ರಾಜನ ಇಂಥಾ ತಲೆಬುಡವಿಲ್ಲದ ಮಾತುಗಳನ್ನು ಕೇಳಿದರೋ ಆಗಲೇ ಆ ಜನರಲ್ಲಿ ಒಂದು ಗುಂಪಿನ ಸ್ನೇಹಿತರೆಲ್ಲಾ ಸೇರಿ ಒಂದು ನಿರ್ಧಾರಕ್ಕೆ ಬಂದುಬಿಟ್ರು. ಅದೇನು ಅಂದ್ರೆ, ಇನ್ನು ಯಾವುದೇ ಕಾರಣಕ್ಕೂ ಈ ರಾಜ ನಮ್ಮ ಸಾಮ್ರಾಜ್ಯವನ್ನು ಆಳೋಕೆ ಲಾಯಕ್ಕಲ್ಲ. ನಾವು ಹೆಂಗಾದ್ರೂ ಮಾಡಿ ಈ ರಾಜನ ಕಥೆ ಮುಗಿಸಿ ನಮಗೊಬ್ಬ ಒಳ್ಳೆಯ ರಾಜನನ್ನು ಆರಿಸಿಕೊಳ್ಳಬೇಕು ಅಂತ ತೀರ್ಮಾನಿಸಿಕೊಳ್ಳುತ್ತಲೇ ಅವರಿಗೆ ಆ ತೇಜಸ್ಸಿನ ವ್ಯಕ್ತಿ ನೆನಪಾಗಿದ್ದ. ಹಾಗೆ ಅಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆನಪಾದ ತೇಜಸ್ಸಿನ ಹೆಸರು
ಕ್ರೋಧಾಘ್ನಿ !
ರಾಜನ ಉಡಾಪೆ ಮಾತುಗಳಿಂದ ರೊಚ್ಚಿಗೆದ್ದ ಪ್ರಜೆಗಳು ರಾಜನಿಗೆ ಮನದಲ್ಲಿ ಹಿಡಿ ಶಾಪ ಹಾಕುತ್ತಾ ಹಿಂದಿರುಗಿದಾಗ ರಾಜ್ಯದ ಸಾಕಷ್ಟು ಯುವಕರು ಸೇರಿ ಪಾಳು ದೇವಸ್ಥಾನವೊಂದರಲ್ಲಿ ಹಳೆಯ ಗೋಣಿಚೀಲದ ಮೇಲೆ ಬತ್ತಿ ಸೇದುತ್ತಾ ಕುಳಿತ ವೃದ್ಧನ ಬಳಿಬಂದು ನಡೆದುದನ್ನೆಲ್ಲಾ ಹೇಳಿ, ತಮಗೀಗ ಆದರ್ಶ ನಾಯಕನೊಬ್ಬನ ಅನಿವಾರ್ಯವಿದೆ ಕರುಣೆತೋರು ತಾತಾ ಎಂದು ಕೇಳಿದಾಗ ನಾಳೆ ಬೆಳಗ್ಗೆ ಈ ಗುಡಿಯ ಮುಂದೆ ಒಂದು ಕುದುರೆ ಬಂದಿರುತ್ತೆ ನೀವು ಅದನ್ನು ಅನುಸರಿಸಿ ಹೋಗಿ ಅಲ್ಲಿ ಆ ಕ್ರೋಧಾಘ್ನಿ ಸಿಗುತ್ತಾನೆ ಆದರೆ ಹೋಗುವಾಗ ಸಾವು ಬದುಕಿನ ನಡುವೆ ಹೋರಾಡುವಂಥಾ ಒಬ್ಬ ಹಣ್ಣಣ್ಣು ಮುದುಕಿಯನ್ನು ಕರೆಯ್ದೊಯ್ಯಿರಿ, ಆ ಮುದುಕಿಯನ್ನೂ ಸೇರಿ ಕೇವಲ ಐದು ಜನರಿಗೆ ಮಾತ್ರ ಭೇಟಿಯ ಅವಕಾಶ. ಯಾವುದೇ ಕಾರಣಕ್ಕೂ ಕುದುರೆಯನ್ನು ಹಿಂಬಾಲಿಸುವ ಪ್ರಯಾಣದಲ್ಲಿ ಯಾವುದಕ್ಕಾದರೂ ಅಂಜಿ ಪ್ರಯಾಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದರೆ ಅವರು ಅಲ್ಲೇ ಕಲ್ಲಾಗುವರು ಎಂದು ಹೇಳಿ ಕಳಿಸುವನು.
ಅಂದು ರಾತ್ರಿ ಆ ನಗರದ ಎಲ್ಲಾ ಹಿರಿಯರು, ಕಿರಿಯರು, ವೃದ್ಧರು, ಮಹಿಳೆಯರು, ಯುವಕರು ಎಲ್ಲರೂ ಸೇರಿ ನಾಲ್ಕು ಜನ ಯುವಕರನ್ನೂ, ಒಬ್ಬ ಬಿಕಾರಿ ಮುದುಕಿಯನ್ನೂ ಪ್ರಯಾಣಕ್ಕೆ ನೇಮಿಸಿದಾಗ ಮುಗಿಲಲ್ಲಿ ಒಮ್ಮೆ ಮಿಂಚು ಕಾಣಿಸುತ್ತೆ. ಆ ಬೆಳಕು ಕಂಡ ಪ್ರಜೆಗಳು ತಮಗೆ ಒಳ್ಳೆಯ ಕಾಲ ಶುರುವಾಗಲಿದೆ ಎಂಬ ಹಿಗ್ಗಿನಿಂದ ರಾತ್ರಿ ಮಲಗೋದನ್ನೂ ಮರೆತು ಬೆಳಗು ಕಾಣುತ್ತಾರೆ. ಮಾರನೆಯ ದಿನ ಇಡೀ ನಗರದ ಪ್ರತಿ ಪ್ರಜೆಯೂ ಭಕ್ತಿ ಮತ್ತು ತುಂಬು ನಂಬುಗೆಯಿಂದ ಮತ್ತದೇ ಪಾಳು ದೇವಾಲಯದ ಹತ್ತಿರ ಬಂದು ಆ ವೃದ್ಧ ಸನ್ಯಾಸಿಯ ಕಾಲಿಗೆ ನಗರ ನೇಮಿಸಿದ ಐವರೂ ನಮಸ್ಕರಿಸುತ್ತಲೇ ಅಲ್ಲೊಂದು ಕುದುರೆ ಕಾಣಿಸುತ್ತೆ. ಆಗ ಒಬ್ಬ ಯುವಕ ಆ ಹಣ್ಣಣ್ಣು ಮುದುಕಿಯನ್ನು ತನ್ನ ಹೆಗಲಮೇಲೆ ಹೊತ್ತುಕೊಳ್ಳುತ್ತಾನೆ. ಅವನಿಗೆ ಸುಸ್ತಾದಾಗ ಅಜಿಯನ್ನ್ಜು ಇನ್ನೊಬ್ಬ ಯುವಕನ ಹೆಗಲಿಗೆ ಶಿಪ್ಟ್ ಮಾಡಿಕೊಂಡರಾಯಿತು ಎಂದು ನಿರ್ಧರಿಸಿಕೊಂಡು ಪ್ರಯಾಣ ಆರಂಭಿಸುತ್ತಾರೆ.
ಇವರು ಧೈರ್ಯದಿಂದ ಹರಿವ ಹಾವುಗಳನ್ನು ದಾಟಿದ್ದನ್ನು ಕಂಡ ಕುದುರೆ ಮತ್ತೆ ಮುಂದೆ ಹೋಗುತ್ತೆ ಸ್ವಲ್ಪ ದೂರ ಹೋದ ನಂತರ ಮುಗಿಲಿಂದ ಚೇಳ ಮಳೆ ಸುರಿಯತೊಡಗುತ್ತೆ ನಮ್ಮ ಒಳ್ಳೆಯತನವೇ ಕಾಪಾಡಬೇಕು ನಮ್ಮನ್ನು ಎಂದುಕೊಂಡು ಆ ಭರಗುಟ್ಟುವ ಚೇಳ ಮಳೆಯಲ್ಲಿಯೇ ಪ್ರಯಾಣ ಮುಂದುವರೆಸುತ್ತಾರೆ. ಮುಗಿಲಿಂದ ಬೀಳುತ್ತಿರುವ ಚೇಳುಗಳು ಈ ಐವರ ಅಡಿಯಿಂದ ಮುಡಿಯವರೆಗೂ ಬೀಳುತ್ತಿರುತ್ತವೆ. ಕೋಟಿ ಕೋಟಿ ಚೇಳುಗಳು ಇವರುಗಳ ದಾರಿಯಲ್ಲಿ ಬಿದ್ದಿರುತ್ತವೆ. ಇವರು ಅವುಗಳನ್ನು ತುಳಿದುಕೊಂಡೇ ಪ್ರಯಾಣಿಸುತ್ತಾರೆ.
ಇನ್ನೂ ಸ್ವಲ್ಪ ಮುಂದೆ ಹೋದಾಗ ಅಲ್ಲೊಂದು ಗುಹೆಯೊಳಗೆ ಕುದುರೆ ಹೋಗುತ್ತೆ ಇವರೂ ಹಿಂಬಾಲಿಸುತ್ತಾರೆ. ಆ ಗುಹೆಯೊಳಗೆ ಕುದುರೆ ಮಾಯವಾಗುತ್ತೆ,. ಮತ್ತು ಅಲ್ಲಿ ಉಜ್ವಲ ಬೆಳಕೊಂದು ಮಿಂಚುತಿರುತ್ತೆ. ಆದರೆ ಅಲ್ಲಿ ಯಾರೂ ಇರೋದಿಲ್ಲ. ಇನ್ನು ಕ್ರೋಧಾಘ್ನಿಯನ್ನು ಹುಡುಕೋದು ಹೇಗೆ ? ದಿಕ್ಕು ಕಾಣದಂತಾಗಿ ಕಂಗಾಲಾಗಿ ತಾವು ಅಲ್ಲಿಯವರೆಗೂ ಪ್ರಯಾಣದುದ್ದಕ್ಕೂ ಅನುಭವಿಸಿದ ಯಾತನೆಯನ್ನೂ ನೆನೆದು ಅಜ್ಜಿಯನ್ನು ಆ ಗುಹೆಯಲ್ಲಿನ ಕಟ್ಟೆಯಂಥಹ ಕಲ್ಲೊಂದರ ಮೇಲೆ ಕೂರಿಸಿ, ಈ ನಾಲ್ವರೂ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ.
ಇನ್ನೇನು ಸಾವಿಗೆ ಹತ್ತಿರವಿದ್ದಂತಿದ್ದ ಆ ವೃದ್ಧೆ, ನಾಡಿನ ಒಳಿತಿಗಾಗಿ ಆ ನಾಲ್ಕೂ ಯುವಕರು ತನ್ನನ್ನು ಹೆಗಲಮೇಲೆ ಹೊತ್ತು ಪಟ್ಟ ಪಡಿಪಾಟಲನ್ನು ನೆನೆದು ಇಷ್ಟೊಂದು ಕಷ್ಟಪಟ್ಟು ಬಂದರೂ ಬಂದ ದಾರಿಗೆ ಸುಂಕವಿಲ್ಲದಂತಾಯ್ತಲ್ಲಾ, ಇನ್ನು ಮರಳಿ ಹೋಗುವುದಾದರೆ, ಆ ಚೇಳ ಮಳೆ, ಹಾವ ಹೊಳೆಯನ್ನು ದಾಟಿ ಗೆದ್ದು ಬದುಕಬಲ್ಲೆವಾ ನಾವು ? ಯೋಚಿಸುತ್ತ ಪಕ್ಕದಲ್ಲಿ ಮೂರ್ತಿಯಂಥಿದ್ದ ಕಲ್ಲಿನಲ್ಲಿದ್ದ ಬುಜದಾಕೃತಿಗೆ ತಲೆಗೊಟ್ಟು ಕಣ್ಣೀರಿಡುತ್ತಾಳೆ. ಮುದುಕಿಯ ಕಣ್ಣೀರು ಯಾವಾಗ ಆ ಕಲ್ಲಿಗೆ ಸೋಕುತ್ತೋ ಆಗ
ಜೀವ ಪಡೆಯುತ್ತೆ ಆ ಮೂರ್ತಿಗಲ್ಲು!
ಹೌದು. ಆ ಮುದುಕಿ ಕಣ್ಣೀರು ಸುರಿಸಿದ್ದ ಬುಜಗಳೇ ಕ್ರೋಧಾಘ್ನಿಯ ಬುಜಗಳಾಗಿದ್ದವು. ಆ ಪಕ್ಕದಲ್ಲಿನ ಕಲ್ಲು ಮೂರ್ತಿಯೇ ಕ್ರೋಧಾಘ್ನಿಯಾಗಿದ್ದ. ಯಾವಾಗ ಅಜ್ಜಿಯ ಕಣ್ಣೀರಿನಿಂದ ಕಲ್ಲಿನ ಶಿಲ್ಪ ಜೀವ ಪಡೆದು ಕ್ರೋಧಾಘ್ನಿ ಮೂಡಿದನೋ, ತಕ್ಷಣ ಮುಗಿಲಲ್ಲಿ ಗುಡುಗು ಸಿಡಿಲುಗಳ ಸಪ್ಪಳವಾಗಿ ತನ್ನ ಕಳೆದುಹೋದ ಶಕ್ತಿಯೆಲ್ಲಾ ಮರಳಿಬಿಟ್ಟಿತು. ಅಲ್ಲಿಗೆ ಬಂದಿದ್ದ ಯುವಕ, ಅಜ್ಜಿಗೆ ಅತ್ಯಾಶ್ಚರ್ಯವಾದರೂ ಸಾವರಿಸಿಕೊಂಡು ತನ್ನ ವ್ಯಥೆಯನ್ನೆಲ್ಲಾ ಹೇಳಿದಾಗ ಅವರಿಗೆ ವಂದಿಸಿದ ಕ್ರೋಧಾಘ್ನಿ 'ನೀವುಗಳೇ ನನ್ನ ಪಾಲಿನ ದೇವತೆಗಳಿದ್ದಂತೆ. ಬನ್ನಿ ನನ್ನ ಜೊತೆ' ಎಂದು ಗುಹೆಯ ಆಚೆ ಬರುತ್ತಲೇ ಅಲ್ಲೊಂದು ರಥವು ಸಿದ್ಧವಾಗಿತ್ತು.
ಜೀವ ಪಡೆಯುತ್ತೆ ಆ ಮೂರ್ತಿಗಲ್ಲು!
ಹೌದು. ಆ ಮುದುಕಿ ಕಣ್ಣೀರು ಸುರಿಸಿದ್ದ ಬುಜಗಳೇ ಕ್ರೋಧಾಘ್ನಿಯ ಬುಜಗಳಾಗಿದ್ದವು. ಆ ಪಕ್ಕದಲ್ಲಿನ ಕಲ್ಲು ಮೂರ್ತಿಯೇ ಕ್ರೋಧಾಘ್ನಿಯಾಗಿದ್ದ. ಯಾವಾಗ ಅಜ್ಜಿಯ ಕಣ್ಣೀರಿನಿಂದ ಕಲ್ಲಿನ ಶಿಲ್ಪ ಜೀವ ಪಡೆದು ಕ್ರೋಧಾಘ್ನಿ ಮೂಡಿದನೋ, ತಕ್ಷಣ ಮುಗಿಲಲ್ಲಿ ಗುಡುಗು ಸಿಡಿಲುಗಳ ಸಪ್ಪಳವಾಗಿ ತನ್ನ ಕಳೆದುಹೋದ ಶಕ್ತಿಯೆಲ್ಲಾ ಮರಳಿಬಿಟ್ಟಿತು. ಅಲ್ಲಿಗೆ ಬಂದಿದ್ದ ಯುವಕ, ಅಜ್ಜಿಗೆ ಅತ್ಯಾಶ್ಚರ್ಯವಾದರೂ ಸಾವರಿಸಿಕೊಂಡು ತನ್ನ ವ್ಯಥೆಯನ್ನೆಲ್ಲಾ ಹೇಳಿದಾಗ ಅವರಿಗೆ ವಂದಿಸಿದ ಕ್ರೋಧಾಘ್ನಿ 'ನೀವುಗಳೇ ನನ್ನ ಪಾಲಿನ ದೇವತೆಗಳಿದ್ದಂತೆ. ಬನ್ನಿ ನನ್ನ ಜೊತೆ' ಎಂದು ಗುಹೆಯ ಆಚೆ ಬರುತ್ತಲೇ ಅಲ್ಲೊಂದು ರಥವು ಸಿದ್ಧವಾಗಿತ್ತು.
ಎಲ್ಲರೂ ಆ ರಥದಲ್ಲಿ ಕೂಡುತ್ತಲೇ ಕೆನೆಯುತ್ತ ರಥದ ಕುದುರೆಗಳು ಆ ಲಂಪಟ ರಾಜನ ಸಾಮ್ರಾಜ್ಯದತ್ತ ನೆಗೆದವು. ಈಬಾರಿ ಚೇಳ ಮಳೆ ಬೀಳುವ ದಾರಿಯಲ್ಲಿ ಮಲ್ಲಿಗೆ ಮಳೆ ಸುರಿಯುತ್ತಿತ್ತು. ರಥದಲ್ಲಿ ಕುಳಿತ ಈ ಐವರ ಆಶ್ಚರ್ಯಕ್ಕೆ ಎಲ್ಲೆಯೇ ಇಲ್ಲದಂತೆ ಇದೊಂದು ಕನಸೇನೋ ಎಂಬಂತೆ ದಿಭ್ರಾಂತರಾಗಿ, ನಡೆಯುತ್ತಿರುವುದನ್ನೆಲ್ಲಾ ಅನುಭವಿಸುತ್ತಿದ್ದರು. ರಥ ಇನ್ನೂ ಸ್ವಲ್ಪ ಮುಂದೆ ಹೋದಾಗ ಆ ಹಾವ ಹೊಳೆ ಇದ್ದ ಜಾಗದಲ್ಲಿ ಗುಲಾಬಿ ಪಕಳೆಗಳು ಗಾಳಿಗೆ ಒಂದೇ ದಿಕ್ಕಿಗೆ ಹಾರುತ್ತಿದ್ದವು. ಈಗ ಮತ್ತೂ ಆಶ್ಚರ್ಯದಿಂದ ದಂಗಾಗಿದ್ದ ಈ ಐವರೂ ಆ ಪಾಳುಗುಡಿಯ ಸನ್ಯಾಸಿಯನ್ನೊಮ್ಮೆ ಮನದಲ್ಲಿ ನೆನೆದು ಕೈ ಮುಗಿಯುತ್ತಿದ್ದಂತೆಯೇ ಅಕ್ಷರಸಹಃ ಕ್ರೋಧಾಘ್ನಿಯ ರಥ ಆ ಸನ್ಯಾಸಿಯ ಮುಂದಿತ್ತು!
ಯಾವುದೋ ಲೋಕಕ್ಕೆ ಹೋಗಿ ಬಂದ ಅನುಭವದಲ್ಲಿದ್ದ ಐವರೂ ರಥದಿಂದಿಳಿದು ಆ ಸನ್ಯಾಸಿಯ ಪಾದಕ್ಕೆರಗಿದರು. ಕ್ರೋಧಾಘ್ನಿಯೂ ಆ ಸನ್ಯಾಸಿಯ ಪಾದಕ್ಕೆರಗಿದಾಗ 'ಕ್ರೋಧಾಘ್ನಿ ನಿನ್ನ ಆಡಳಿತದ ಶಕೆ ಇಂದಿನಿಂದಲೇ ಶುರುವಾಗಲಿ ನನ್ನ ಕರ್ತವ್ಯವಿಲ್ಲಿಗೆ ಮುಗಿಯಿತು ವಿಜಯೀಭವ' ಎಂದಾಗ ಆ ಗುರುವಿನ ಪ್ರಾಣ ಪಕ್ಷಿ ಹಾರಿಹೋಯಿತು. ಈ ಐವರ ದಾರಿಯನ್ನೇ ಎದಿರು ನೋಡುತ್ತಾ ಆ ಪಾಳುಗುಡಿಯ ಬಳಿಯೇ ಜಮಾಯಿಸಿದ್ದ ನಗರದ ಎಲ್ಲರ ಕಂಗಳುತುಂಬಿ ಬಂದವು. ಗುರುಗಳ ಅಂತಿಮ ಕಾರ್ಯ ಮುಗಿಸುತ್ತಿದ್ದಂತೆಯೇ ಕ್ರೋಧಾಘ್ನಿ ರಾಜನ ವಿರುದ್ಧ ರಣವೀಳ್ಯವನ್ನು ಕಳಿಸಿದಾಗ ನೊದಲೇ ಯುದ್ಧದ ಲವಲೇಶವೂ ತಿಳಿಯದ ರಾಜ, ತನ್ನ ಪ್ರಜೆಗಳೇ ನನ್ನ ವಿರುದ್ಧ ನಿಂತರಲ್ಲಾ ಎಂಬ ಸಿಟ್ಟಿಗೆ ರಣರಂಗಕ್ಕೆ ಬಂದ ಕ್ರೋಧಾಘ್ನಿ ರಾಜನನ್ನು ಸಂಹರಿಸಿದ.
ಯಾವುದೋ ಲೋಕಕ್ಕೆ ಹೋಗಿ ಬಂದ ಅನುಭವದಲ್ಲಿದ್ದ ಐವರೂ ರಥದಿಂದಿಳಿದು ಆ ಸನ್ಯಾಸಿಯ ಪಾದಕ್ಕೆರಗಿದರು. ಕ್ರೋಧಾಘ್ನಿಯೂ ಆ ಸನ್ಯಾಸಿಯ ಪಾದಕ್ಕೆರಗಿದಾಗ 'ಕ್ರೋಧಾಘ್ನಿ ನಿನ್ನ ಆಡಳಿತದ ಶಕೆ ಇಂದಿನಿಂದಲೇ ಶುರುವಾಗಲಿ ನನ್ನ ಕರ್ತವ್ಯವಿಲ್ಲಿಗೆ ಮುಗಿಯಿತು ವಿಜಯೀಭವ' ಎಂದಾಗ ಆ ಗುರುವಿನ ಪ್ರಾಣ ಪಕ್ಷಿ ಹಾರಿಹೋಯಿತು. ಈ ಐವರ ದಾರಿಯನ್ನೇ ಎದಿರು ನೋಡುತ್ತಾ ಆ ಪಾಳುಗುಡಿಯ ಬಳಿಯೇ ಜಮಾಯಿಸಿದ್ದ ನಗರದ ಎಲ್ಲರ ಕಂಗಳುತುಂಬಿ ಬಂದವು. ಗುರುಗಳ ಅಂತಿಮ ಕಾರ್ಯ ಮುಗಿಸುತ್ತಿದ್ದಂತೆಯೇ ಕ್ರೋಧಾಘ್ನಿ ರಾಜನ ವಿರುದ್ಧ ರಣವೀಳ್ಯವನ್ನು ಕಳಿಸಿದಾಗ ನೊದಲೇ ಯುದ್ಧದ ಲವಲೇಶವೂ ತಿಳಿಯದ ರಾಜ, ತನ್ನ ಪ್ರಜೆಗಳೇ ನನ್ನ ವಿರುದ್ಧ ನಿಂತರಲ್ಲಾ ಎಂಬ ಸಿಟ್ಟಿಗೆ ರಣರಂಗಕ್ಕೆ ಬಂದ ಕ್ರೋಧಾಘ್ನಿ ರಾಜನನ್ನು ಸಂಹರಿಸಿದ.
ಆಗ ಮುಗಿಲು ಕಳಚಿ ಅಪ್ಪಳಿಸಿದಷ್ಟು ಮಳೆಯಾಯಿತು. ಮಸೀದಿಯಲ್ಲಿ ನಮ್ಹಾಜ್ ನಡೆಯುತ್ತಿತ್ತು. ನಗರದ ಚರ್ಚಿನಲ್ಲಿ ಪ್ರಾರ್ಥನೆ ನಡೆದಿತ್ತು. ದೇವಾಲಯಗಳಲ್ಲಿ ಪೂಜೆ ನಡೆದಿತ್ತು. ಸಾಮ್ರಾಜ್ಯದ ಪ್ರತಿಯೊಂದು ಗುಡಿಸಲಲ್ಲಿ ಪ್ರಣತಿ ಬೆಳಗಿತ್ತು. ಅಲ್ಲಿಂದ ಆ ರಾಜ್ಯ ಸುಭಿಕ್ಷವಾಗಿ ಬಾಳು ನಡೆಸತೊಡಗಿತು'. ಎಂದು ಹೇಳುತ್ತಾ ಅಜ್ಜಿ ತನ್ನ ಕತ್ತನ್ನು ಕೆಳಗಿಳಿಸಿ ನೋಡಿದರೆ ಅದಾಗಲೇ ನಟರಾಜ ಅಜ್ಜಿಯ ಮಡಿಲಲ್ಲಿ ನಿದ್ರಿಸುತ್ತಿದ್ದ. 'ಅಯ್ಯೋ ಕರ್ಮವೇ ಇವನಾಗಲೇ ಮಲಗಿಬಿಟ್ಟನಾ ? ಕಥೆಯನ್ನ ಎಷ್ಟು ಕೇಳಿದನೋ ಏನೋ, ನಾಳೆ ಮತ್ತೆ ಅಜ್ಜೀ ನೀನು ನೆನ್ನೆ ಕಥೆಯನ್ನ ಅರ್ಧಕ್ಕೇ ನಿಲ್ಲಿಸಿದ್ದೆ ಇವತ್ತು ಪೂರ್ತಿ ಹೇಳು ಅಂತ ಕ್ಯಾತೆ ತೆಗೀತಾನೆ. ಮತ್ತೊಮ್ಮೆ ನಾನು ಇದೇ ಕಥೆಯನ್ನೇ ಹೇಳಬೇಕು. ಒಳ್ಳೇ ಹುಡ್ಗ ಇವ್ನು' ಎಂದೇಳುತ್ತಾ ಮಲಗಿದ್ದ ನಟರಾಜನನ್ನು ಅಜ್ಜಿ ಹೆಗಲಿಗೆ ಹಾಕಿಕೊಂಡು ಮೆಲ್ಲಗೆ ಮೆಟ್ಟಿಲುಗಳನ್ನಿಳಿದು ಕೆಳಗೆ ಬಂದು ನಟರಾಜನನ್ನು ಅವನಮ್ಮನ ಪಕ್ಕಕ್ಕೆ ಮಲಗಿಸಿ, ತಾನೂ ಹೋಗಿ ನಿದ್ರೆಗೆ ಜಾರಿದಳು.





No comments:
Post a Comment